Thursday 8 July, 2010

ಮಾನವೀಯ ಶ್ವೇತಾ ಅವರಿಗೆ,


ಪ್ರತಿ ಸಾರಿ ಡಾಕ್ಟರ್ಗಳ ಬಗ್ಗೆ ಲೇಖನ ಪ್ರಕಟವಾದಾಗಲೂ, ಲೇಖಕರು ಯಾವುದೋ ಒಂದು ಪ್ರಕರಣವನ್ನು ಹಿಡಿದುಕೊಂಡು ಪೂರ್ವಾಗ್ರಹ ಪೀಡಿತರಾಗಿ ಇಡೀ ವೈದ್ಯ ಸಮೂಹವನ್ನು, ಅವರ ಮಾನವೀಯತೆಯನ್ನು ಹಿಗ್ಗಾಮುಗ್ಗಾ ಬೈಯ್ಯುತ್ತಾರೆ. ಯಾವನೋ ಒಬ್ಬ ವೈದ್ಯ ಕೆಟ್ಟದಾಗಿ ವರ್ತಿಸಿದರೆ ಅದು ಮರುದಿನ ಬೆಳಿಗ್ಗೆಯ ಬಿಸಿ ಬಿಸಿ ಸುದ್ದಿಯಾಗುತ್ತದೆ. ಆದರೆ ಪ್ರತಿದಿನ 12 ರಿಂದ 14 ಗಂಟೆ ಕಾರ್ಯತತ್ಪರರಾಗಿರುವ ಉಳಿದ ಲಕ್ಷಾಂತರ ವೈದ್ಯರು ನಿಮಗೆ ಕಾಣುವದೇ ಇಲ್ಲವೇನೋ???

ಇರಲಿ ನಾನು ನಿಮ್ಮ ದೃಷ್ಟಿ ದೋಷದ ಬಗ್ಗೆ ಮಾತನಾಡುವ ಬದಲು ಅದನ್ನು ಸರಿ ಮಾಡಲು ಪ್ರಯತ್ನಿಸುತ್ತೇನೆ. ನಿಮಗೆ ಗೊತ್ತೇ ಅಂತಹ ಮಾನವೀಯತೆ ಇಲ್ಲದ ವೈದ್ಯರನ್ನು ನಿರ್ಮಿಸುತ್ತಿರುವವರು ಯಾರೆಂದು??? ಸಮಾಜವೇ!!!


ಸಾಮಾನ್ಯವಾಗಿ ವೈದ್ಯ ಕೋರ್ಸಗಳನ್ನು ಆರಿಸಿಕೊಳ್ಳುತ್ತಿರುವವರು ಪಿಯುಸಿಯಲ್ಲಿ ಮತ್ತು ಸಿಇಟಿಯಲ್ಲಿ ಉತ್ತಮ ಅಂಕ ಗಳಿಸಿದವರೇ. ವಯಸ್ಸು 17 ರಿಂದ 19ರ ಒಳಗಿನವರು. ಅದಿಲ್ಲದಿದ್ದರೆ ದುಡ್ಡು ಹೇರಳವಾಗಿರುವವರು. ಅವರ ಬಗ್ಗೆ ನಾನು ಮಾತಾಡಬೇಕಿಲ್ಲ. ಅವರ ಜೀವನ ಎಂದಿಗೂ ಸುಗಮ. ಸೀಟ್ ಪಡೆಯುವದರಿಂದ ಹಿಡಿದು ಮಾಕ್ರ್ಸಕಾರ್ಡ ಪಡೆಯುವವರೆಗೂ. ಅವರಿಗೆ ವಿವಿಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ವ್ಯಕ್ತಿಗಳ ಕೈ ಬಿಸಿ ಮಾಡುವದೂ ಗೊತ್ತು, ಪ್ರಶ್ನೆ ಪತ್ರಿಕೆ ಲೀಕ್ ಮಾಡಿಸುವದೂ ಗೊತ್ತು.

ಇಲ್ಲಿ ಶುರುವಾಗುತ್ತದೆ ಮೆರಿಟ್ ಸೀಟ್ ಪಡೆದವರ ಗ್ರಹಚಾರ. ಆದರ್ಶಕ್ಕೆ ಬಿದ್ದು ವೈದ್ಯಕೀಯ ವಿಭಾಗವನ್ನು ಆರಿಸಿಕೊಂಡಿದ್ದಕ್ಕೆ ಮುಖಕ್ಕೆ ಮಸಿ ಬಳಿದುಕೊಳ್ಳುವಂತಹ ಪರಿಸ್ಥಿತಿ. ಒಂದೆಡೆ ತುಂಬಾ ಓದಬೇಕೆಂಬ ಟೆನ್ಷನ್. ಜೊತೆಗೆ ಮ್ಯಾನೇಜಮೆಂಟ್ ಸೀಟ್ ಪಡೆದವರ ಹಾರಾಟ ನೋಡಿದರಂತೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಸಾಗುತ್ತದೆ. ಎಂದೂ ಕಾಲೇಜಿಗೆ ಕಾಲಿಡದವರು ಪೂರ್ಣ ಅಟೆಂಡೆನ್ಸ್ ಪಡೆದು ಪ್ರಶ್ನೆ ಪತ್ರಿಕೆ ಲೀಕ್ ಮಾಡಿಕೊಂಡೋ, ಅವರಿವರ ಕೈ ಬಿಸಿ ಮಾಡಿಯೋ ಉತ್ತಮ ಅಂಕ ಗಳಿಸಿ ಹೋಗಿಬಿಡುತ್ತಾರೆ. ಇಂತಹ ಸ್ಥಿತಿಯಲ್ಲಿ ಎಷ್ಟೊಂದು ವಿದ್ಯಾರ್ಥಿಗಳು(ನಿಜವಾದ) ಮಾನಸಿಕ ಒತ್ತಡಕ್ಕೆ ತುತ್ತಾಗುತ್ತಾರೆ.

ಇನ್ನೊಂದೆಡೆ ಪಿಯುಸಿಯಲ್ಲಿ ಜಸ್ಟ ಪಾಸಾಗಿ ಎಂಜಿನಿಯರಿಂಗ್ ಮಾಡಿರುವ ಸ್ನೇಹಿತರು 30 ರಿಂದ 40 ಸಾವಿರ ಎಣಿಸಿಕೊಳ್ಳತ್ತಿರುವಾಗ 10 ರಿಂದ 15 ಸಾವಿರಕ್ಕೆ ಐದೂವರೆ ವರ್ಷ ಓದಿ ಹಗಲು ರಾತ್ರಿ ದುಡಿಯುವ ಕಿರಿಯ ವೈದ್ಯರಿಗೆ ಸಮಾಜದ ಈ ತಾರತಮ್ಯವನ್ನು ನೋಡಿ ವಾಕರಿಕೆ ಬರದೇ ಇನ್ನೇನು ಪ್ರೀತಿ ಉಕ್ಕಬೇಕೇ??? ಇದೇ ತಾರತಮ್ಯದ ವಿರುದ್ಧ ವೈದ್ಯರು ಹೋರಾಡಲು ನಿಂತಾಗ ಇದೇ ರಾಜಕಾರಿಣಿಗಳು ಮತ್ತು ಮಾಧ್ಯಮದವರು ರೆಜಿಸ್ಟ್ರೇಷನ್ ರದ್ದುಪಡಿಸುವದಾಗಿ ಹೆದರಿಸಿ ವೈದ್ಯರ ಬಾಯಿ ಮುಚ್ಚಿಸುವದಿಲ್ಲವೇ???



ಸಮಾಜಕ್ಕೆ ವೈದ್ಯರಿಗಿಂತ ಸಾಫ್ಟವೇರ್ ತಂತ್ರಜ್ಞರೇ ಮುಖ್ಯವೇನೋ??? ಎಲ್ಲಿಯವರೆಗೆ ಸಮಾಜ ವೈದ್ಯರಿಗೆ ಅವರ ಓದಿಗೆ ತಕ್ಕ ವೇತನ ನೀಡುವದಿಲ್ಲವೋ ಅಲ್ಲಿಯವರೆಗೆ ಮಾನವೀಯತೆ ಇಲ್ಲದ ವೈದ್ಯರು ನಿರ್ಮಾಣವಾಗುತ್ತಲೇ ಇರುತ್ತಾರೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸಾಫ್ಟವೇರ್ ತಂತ್ರಜ್ಞರಿಗಿಂತ ಹೆಚ್ಚಿನ ವೇತನ ಕೊಡುವಂತೆ ಮಾಧ್ಯಮದವರು ಮಾಡಿ ತೋರಿಸಿ ಆಮೇಲೆ ವೈದ್ಯರು ಹಳ್ಳಿಗಳಿಗೆ ಯಾಕೆ ಹೋಗಲ್ಲ ಅಂತ ನೋಡೋಣ!!!

ನೀವು ವೈದ್ಯರ ಮಾನವೀಯತೆಯ ಬಗ್ಗೆ ಮಾತ್ರ ಮಾತನಾಡುತ್ತೀರಿ, ಸಮಾಜದವರ ಮಾನವೀಯತೆ ಬಗ್ಗೆ ನಿಮಗೆ ಗೊತ್ತೆ??? ಇದೇ ವೈದ್ಯ ಕಾಲೇಜುಗಳ ಪ್ರಾಕ್ಟಿಕಲ್ ಪರೀಕ್ಷೆಗಳಲ್ಲಿ ರೋಗಿಗಳು ಸಹಕರಿಸಲು 1000-1500 ರೂಪಾಯಿ ವೈದ್ಯ ವಿದ್ಯಾರ್ಥಿಗಳಿಂದ ಕೀಳುತ್ತಾರೆ ಇದು ನಿಮಗೆ ಗೊತ್ತೇ? ಇದು ಮಹಾ ಮಾನವೀಯತೆ ಏನೋ? ನೀವು ಏನು ಬೀಜ ಬಿತ್ತುತ್ತೀರೋ ಅದನ್ನೆ ಬೆಳೆಯುತ್ತೀರಿ. ಸಮಾಜದವರೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹಣ ಕೀಳುವ ಭಾವನೆ ಬೆಳೆಸುವದು. ಕೋರ್ಸ ಆಯ್ಕೆ ಮಾಡಿಕೊಳ್ಳುವಾಗ ವಿದ್ಯಾರ್ಥಿಗಳು ಇನ್ನೂ ತುಂಬಾ ಚಿಕ್ಕವರಾಗಿರುತ್ತಾರೆ. ಅವರಲ್ಲಿ ಪುಸ್ತಕದ ಜ್ಞಾನ ಇರುತ್ತದೆಯೇ ಹೊರತು ಮಾನವೀಯತೆಯ ಶಿಕ್ಷಣ ನೀಡಬೇಕಾದವರು ಸಮಾಜದವರು.

ಇನ್ನು ನೀವು ಹೆರಿಗೆ ವಾರ್ಡ ಬಗ್ಗೆ ಪ್ರಸ್ತಾಪಿಸಿದಿರಿ. ಅಲ್ಲಿರುವ ಆಯಾಗಳ, ನರ್ಸಗಳ ಕೆಲಸದ ಸಮಯ 8-10 ಗಂಟೆಗಳು ಆದರೆ ಕಿರಿಯ ವೈದ್ಯರ ಕೆಲಸದ ಸಮಯ 12-14 ಗಂಟೆಗಳು!!! ಇದು ಯಾವ ಮಾನವೀಯತೆ???

ವೈದ್ಯಕೀಯ ಪುಸ್ತಕಗಳ ಮೌಲ್ಯ ಎಷ್ಟೆಂದು ನಿಮಗೆ ಅಂದಾಜಿರಬಹುದು ಅಂದರೆ ಮೆರಿಟ್ ಸೀಟ ಪಡೆದವರ ಕೈಗೆ ನಿಲುಕುವಂತದಲ್ಲ. ಕೋರ್ಸ ಮುಗಿಯುವದರೊಳಗೆ ಕಮ್ಮಿ ಎಂದರೂ 10-15 ಸಾವಿರ ಪುಸ್ತಕಗಳ ಮೇಲೆ ಖರ್ಚಾಗುತ್ತದೆ. ಇಷ್ಟಾದ ಮೇಲೆ ಕೆಲ ಕಾಲೇಜುಗಳಲ್ಲಿ ಗ್ರಂಥಾಲಯದ ಪುಸ್ತಕಗಳು ಕೇವಲ ಹಿಂದುಳಿದ ವರ್ಗದವರಿಗೆ ಮಾತ್ರ ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿದೆ. ಇದು ಯಾವ ಮಾನವೀಯತೆ???



ಇನ್ನು ಬರಿ ಎಂಬಿಬಿಎಸ್ ಮುಗಿಸಿ ಕೂತರೆ, ಅಪ್ಪ ಅಮ್ಮ ಮಾಡಿರುವ ಸಾಲ ತೀರಿಸುವದು ಹಾಗಿರಲಿ ನಮ್ಮ ಹೊಟ್ಟೆ ನೋಡಿಕೊಳ್ಳುವದೂ ಕಷ್ಟ. ಇನ್ನು ಉನ್ನತ ಶಿಕ್ಷಣ ಪಡೆಯೋಣವೆಂದರೆ ಒಂದೋ ಸಿಕ್ಕಾಪಟ್ಟೆ ದುಡ್ಡಿರಬೇಕು. ಇಲ್ಲದಿದ್ದರೆ 8-10 ವರ್ಷ ನಮಗೆ ಬೇಕಾದ ಕೋರ್ಸ ಮೆರಿಟ್ನಲ್ಲಿ ಸಿಗಲು ಕಾಯಬೇಕು. ಕಾರಣ ಏನು ಗೊತ್ತೇ ನಮ್ಮ ಸರಕಾರ ಒದಗಿಸಿರುವ ಉನ್ನತ ವೈದ್ಯಕೀಯ ಶಿಕ್ಷಣ ಸೀಟುಗಳು 10% ಕಿರಿಯ ವೈದ್ಯರಿಗೂ ಸಾಕಾಗುವದಿಲ್ಲ. ಇದು ಸರಕಾರ ಮೆರೆದ ಮಾನವೀಯತೆಯೇ???



ಇನ್ನೂ ಹೆಚ್ಚಿನ ವೈದ್ಯರ ನೋವು, ದುಃಖಗಳಿಗಾಗಿ ಕಿರಿಯ ವೈದ್ಯರ ಬ್ಲಾಗುಗಳಿಗೆ ಭೇಟಿ ಕೊಡಿ. ಸುಮ್ಮನೆ ನಮ್ಮ ಒಳನೋವುಗಳನ್ನು ತಿಳಿಯದೇ ಏನೇನೋ ಬರೆದು ಮಾನವೀಯತೆ ಉಳಿಸಿಕೊಂಡಿರುವ ಉಳಿದ ವೈದ್ಯರನ್ನು ಕೆರಳಿಸದಿರಿ.



ನೊಂದ ವೈದ್ಯ ವಿದ್ಯಾರ್ಥಿ

2 comments:

Snippet Thoughts said...

Nice. I wish you will keep up this enthusiasm and anger towards injustice even after you finish ur studies. It will keep you faithful to ur profession and not ur money. ಚತ್ತೀಸ್‌ಘರ್‌ ರಾಜ್ಯದ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ, ಯಾರೂ ಹೋಗಲು ಒಪ್ಪದ ಕಗ್ಗಾಡಿನಲ್ಲಿ ಸೇವೆ ಮಾಡಲು ಕೆಲ ವೈದ್ಯರು ದಿಲ್ಲಿಯ ತಮ್ಮ ಲಾಭದಾಯಕ ವೃತ್ತಿಯನ್ನು, ಐಷಾರಾಮಿ ಜೀವನವನ್ನು ಬಿಟ್ಟು ಜನ್ ಸ್ವಾಸ್ತ್ಯ ಸಂಸ್ಥಾನ್ ಎನ್ನುವ ಸಂಸ್ಥೆ ಕಟ್ಟಿಕೊಂಡು, ಕಾಡಿನಲ್ಲಿ ಮೈಲಿಗಟ್ಟಲೆ ನಡೆದು, ಸರಿಯಾದ ನೆಲೆ ಇಲ್ಲದಿದ್ದರೂ ರೋಗಿಗಳಿಂದ ಬರೀ ಎರಡರಿಂದ ಐದು ರೂಪಾಯಿ ತೆಗೆದುಕೊಂಡು ಸೇವೆ ಮಾಡುತ್ತಿರುವಾಗ ನಮ್ಮ ಕರ್ನಾಟಕದ ವೈದ್ಯರಿಗೆ ಯಾಕೆ ಸಾಧ್ಯವಿಲ್ಲ? Please tell me if they studied MBBS freely or did they spend lakhs? Then y did they take up work in rural areas?

Dr.Shrinidhi L K said...

Mam people who work for tribal people will earn fame also and money also. They will be funded by NGOs and government. at the end they will get national award also. but what about common doctor working in rural setup? Will you ever invest in a company which is running in loss? Suppose let us think you have spent 10-15 lakhs on you studies(i am talking about general merit student coming from middle class family) and some invested 10-12 precious years of your life for professional course, then if you get very less salary in which you wont be able to earn back what you have spent, will you choose such career??? And by the way most of students coming from middle class family have taken educational loans. If after completion of education, they dont get a decent salary (for their qualification and number of years spent to study)who is going to pay for bank loans. Whole life will become miserable. Not only medical students repent for choosing the line but even experienced doctors are not satisfied by the justice created by the society for doctors. If you want you can make a survey. 90% of the present doctors advice their children not to come to medical field. Because society thinks that doctors should be like dharma chatra. By the way dharma chatras are also run by people who have lots of money not by a common man.