Sunday, 21 November 2010

Its time to apply disc brakes....

ನಗುಮುಖದ ಈ ನಟರನ್ನು ಬಲ್ಲಿರಾ? ಬಹುಶಃ ದಿನಂ ಬೆಳಗಾದರೆ ಟಿ.ವಿ, ದಿನಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ, ಚುನಾವಣೆ ಬಂತೆಂದರೆ ಮನೆ ಬಾಗಿಲಲ್ಲಿ ದೇವರಂತೆ ಬಂದು ನಿಲ್ಲುವ, ನರಮುಖಿ ವ್ಯಾಘ್ರಗಳಿವು. ಕೇವಲ ಹಣ, ಶಸ್ತ್ರಾಸ್ತ್ರದಿಂದ ಮತ್ತು ಬಾಹುಬಲದಿಂದ  ಮತಗಳಿಸಿ, ಭಾರತ ಮಾತೆಯನ್ನು ತಮ್ಮ ನಿರಂಕುಶ ಸರ್ವಾಧಿಕಾರದಿಂದ ಅಪವಿತ್ರಗೊಳಿಸಿದ ಕೀರ್ತಿ ಇವರಿಗೆ ಸಲ್ಲಲೇಬೇಕು!!! ನಮ್ಮ ಜನರಲ್ಲಿ ರಾಜಕೀಯದ ಬಗ್ಗೆ ಇರುವ ಉಡಾಫೆಯನ್ನು ಬಳಸಿಕೊಂಡು ತಮ್ಮ ಕುಟುಂಬಗಳನ್ನು ಕುಬೇರನ ಅಳಿಯನನ್ನಾಗಿ ಮಾಡಿದವರು!!!  ಜನರ ಮನವನ್ನು ಓದುವಂತಹ ಇಂದ್ರಜಾಲ ವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಾರೆ!!! ಇಂತಹ ಮಹಾಪುರುಷರ ಅಭೂತಪೂರ್ವ ಕೆಸರೆರಚಾಟದ ಕ್ರೀಡೆಗಳಿಂದ ನಮ್ಮ ಕರ್ನಾಟಕ ಇಂದು ದೇಶದೆಲ್ಲೆಡೆ ಹೆಸರುಗಳಿಸತೊಡಗಿದೆ!!! ಎಂದೂ ಕೂಡ ಕೇಂದ್ರ ಸರ್ಕಾರದೊಂದಿಗೆ ಹೊಂದಾಣಿಕೆ ತೋರಿಸದ ಇವರು ಇಂದು ಭ್ರಷ್ಟಾಚಾರದ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕಿಂತ ನಾವೇನು ಕಮ್ಮಿ ಎಂಬಂತೆ ಮೆರೆಯುತ್ತಿದ್ದಾರೆ!!!

"ಇಷ್ಟೆಲ್ಲ ದೇಶ ದ್ರೋಹ, ಜನತಾದ್ರೋಹ ಮಾಡಿರುವ ಇವರಿಗೆ ದೇವರು ಶಿಕ್ಷೆಯನ್ನು ಏಕೆ ಕೊಡುವದಿಲ್ಲ?" ಎಂಬುದು ಪ್ರತಿಯೊಬ್ಬ ಮತದಾರನ ಮನದಾಳದ ಪ್ರಶ್ನೆ. ಚುನಾವಣೆಯಲ್ಲಿ ಮತ ಚಲಾಯಿಸಿದ ಎಲ್ಲ ಜನರು ಈ ರಾಜಕೀಯದ ಕೋಡಂಗಿಯಾಟವನ್ನು ನೋಡಿ ರೋಸಿ ಹೋಗಿದ್ದಾರೆ. ಇದಕ್ಕೆಲ್ಲ ಮಂಗಳ ಹಾಡಬೇಕು ಎಂದು ಎಲ್ಲರ ಮನದಲ್ಲೂ ಇದೆ. ಆದರೆ ಒಬ್ಬನೇ ಎದ್ದು ನಿಂತು ಈ ರಾಜಕೀಯ ಅತ್ಯಾಚಾರದ ವಿರುದ್ಧ ಧ್ವನಿ ಎತ್ತಲು ಧೈರ್ಯ ಸಾಲಬೇಕಲ್ಲ!!! ಇಡೀ ದೇಶದ ಅಪರಾಧ ಜಗತ್ತನ್ನು ತಮ್ಮ ಜೇಬಲ್ಲಿ ಇರಿಸಿಕೊಂಡು ತಿರುಗುವ(ಈ ವಿಷಯ ಜನರಿಗೂ ಮನದಟ್ಟಾಗಿದೆ!!!) ಈ ರಾಜಕಾರಣಿಗಳು ತಮ್ಮ ವಿರುದ್ಧ ಧ್ವನಿ ಎತ್ತುವ 'common man' ನನ್ನು ಕೊಲೆ ಮಾಡಿಸಲೂ ಹೇಸುವವರಲ್ಲ!!!

ಅಂದಹಾಗೆ ಇದನ್ನು ಬರೆಯುತ್ತಿರುವ ನಾನು ಕೂಡ ನಾಳೆ ಜೀವಂತವಾಗಿರುತ್ತೇನೆ ಎಂಬ ಭರವಸೆ ನನಗಿಲ್ಲ(But i know that somebody had to take the initiative may be even at the cost of their life), ಮತ್ತು ನನ್ನನ್ನು ರಕ್ಷಿಸುತ್ತೇವೆ ಅಂತ ಭರವಸೆ ಕೊಡುವ ತಾಕತ್ತು ಕೂಡ ನಮ್ಮ ದೇಶದ ಜನರಿಗೆ ಇಲ್ಲವೇ ಇಲ್ಲವೇನೋ? ಯಾಕೆಂದರೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ಈ ವಿಷಯವನ್ನು ಚೆನ್ನಾಗಿ ಅರಿತಿರುವ ರಾಜಕಾರಣಿಗಳು, ಜನರ ಹಣದಿಂದ ತಮ್ಮ ಅರಮನೆ ಕಟ್ಟಿಕೊಳ್ಳುತ್ತಿದ್ದಾರೆ. ದೇಶದ ಆಸ್ತಿ ನಮ್ಮ ಸ್ವಂತದ ಆಸ್ತಿ ಎಂದೇ ಉಪಯೋಗಿಸಿಕೊಳ್ಳುವ ಇವರು ದೇಶದ ಜನ ನಮ್ಮ ಜನ ಎಂದು ಒಮ್ಮೆಯೂ ಆತ್ಮಸಾಕ್ಷಿಯಾಗಿ ಹೇಳಲಿಲ್ಲ. ಸರಕಾರಕ್ಕೆ ಸೇರಿದ(ಅoದರೆ ಇಡೀ ದೇಶದ ಜನತೆಗೆ ಸೇರಿದ, ಯಾಕೆಂದರೆ ಇದು ಪ್ರಜಾಪ್ರಭುತ್ವ ದೇಶ)  ಜಮೀನು ಮತ್ತು ಸ್ವತ್ತುಗಳನ್ನು ತಮ್ಮ ಹೆಸರಿಗೋ, ಕುಟುಂಬದವರ ಹೆಸರಿಗೋ ದಾಖಲಿಸಿಕೊಳ್ಳುವ ಅಥವಾ ಬೇನಾಮಿ ಆಸ್ತಿ ಮಾಡಿ, ದೇಶವನ್ನು ನುಂಗಿ ಹಾಕಿ, ದೇಶದ ಸಾಲವನ್ನು ತೀರಿಸಲು ಜನಸಾಮಾನ್ಯರು ಜೀತದಾಳುಗಳಂತೆ ದುಡಿಯುವ ಪರಿಸ್ಥಿತಿಯನ್ನು ನಿರ್ಮಿಸುತ್ತಿರುವ ಶಿಲ್ಪಿಗಳು ಇವರು.

To be very frank, ನಾನು ಕೂಡ 2 ವರ್ಷಗಳ ಹಿಂದೆ ಇದೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಅವರು ಕೊಟ್ಟ pose ಗೆ ಮರುಳಾಗಿ ಅವರ fan ಆಗಿದ್ದೆ. ಆದರೆ ಇಂದು ಅವರ ನಿಜವಾದ ಬಣ್ಣ ಬಟಾಬಯಲಾದ ಮೇಲೆ, ಅಖಂಡ ಭಾರತದ ಸಂವಿಧಾನದ ಮೇಲೆ ಇದ್ದ ವಿಶ್ವಾಸವೇ ಹೊರಟುಹೋಗಿದೆ. ನಮ್ಮ ಹಿರಿಯರು ರಚಿಸಿದ ಸಂವಿಧಾನವನ್ನು ಆಗಿನ ಕಾಲದ ರಾಜಕಾರಣಿಗಳೇ ಸರಿಯಾಗಿ ಪಾಲಿಸಲು ಸಾಧ್ಯವಾಗದಿದ್ದಾಗ, ಈಗಿನ ಢೋಂಗಿ ರಾಜಕಾರಣಿಗಳಿಂದ ಸಂವಿಧಾನದ ಪಾಲನೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ?

By the way ಇಷ್ಟು ಅವಸರ ಪಟ್ಟು ಈ ಲೇಖನ ಬರೆಯುತ್ತಿರಲು ಕಾರಣವೆಂದರೆ, ಈ ಢೋಂಗಿ ರಾಜಕಾರಣಿಗಳು ಪಾಕಿಸ್ತಾನದಿಂದ ಒಳನುಗ್ಗುತ್ತಿರುವ ಉಗ್ರಗಾಮಿಗಳಿಗಿಂತ ಸಾವಿರ ಪಾಲು ಅಪಾಯಕಾರಿ. ನಾಳೆ ನಾವೆಲ್ಲ ಇವರಿಂದಾಗಿ ಬೆತ್ತಲೆಯಾಗಿ, ರೋಟಿ, ಕಪಡಾ ಔರ್ ಮಕಾನ್ ಕೂಡ ಇಲ್ಲದಂತೆ ಪಶುಗಳ ಜೀವನ ನಡೆಸಬೇಕಾಗುವ ಸ್ಥಿತಿ ಬರುವದಂತೂ guarantee!!! ಯಾಕೆಂದರೆ ಹೊರಗಿನ ಶತ್ರುಗಳನ್ನು ಸುಲಭವಾಗಿ ಮಟ್ಟ ಹಾಕಬಹುದು. ಆದರೆ ನಮ್ಮೊಳಗೇ ಹಾಲಿನಲ್ಲಿ ಅಡಗಿರುವ ಬೆಣ್ಣೆಯಂತಿದ್ದು, ನಾವು ಕೊಟ್ಟ ಅನ್ನವನ್ನೇ ತಿಂದು, ನಮ್ಮ ಮತಗಳಿಂದಲೇ ನಾಯಕರಾಗಿ, ನಮ್ಮ ಬೆನ್ನಿಗೇ ಚೂರಿಯಿಡುವ ಇಂಥವರನ್ನು ಎದುರಿಸುವದು ಹೇಗೆ?

ನಮ್ಮ weakness ಅನ್ನು ಚೆನ್ನಾಗಿ ಅರಿತಿರುವ ಇವರಿಗೆ plus point  ಏನು ಗೊತ್ತೇ ಇಂತಹ ಲೇಖನವನ್ನು ಬರೆಯುವ ಲೇಖಕನಾಗಲೀ ಅಥವಾ ಓದುಗರಾಗಲಿ ಎರಡು ದಿನ ಈ ವಿಷಯದ ಬಗ್ಗೆ ಮಾತನಾಡಿಕೊಂಡು, ಮರುದಿನದಿಂದ ಏನೂ ನಡೆದೇ ಇಲ್ಲವೆಂಬಂತೆ ಸುಮ್ಮನಾಗಿ ಬಿಡುತ್ತಾರೆ. But this is the time to take action guys. ಯಾಕೆಂದರೆ ಇವರಿಂದ ಭವಿಷ್ಯದಲ್ಲಿ ನಿರ್ಮಾಣವಾಗಬಲ್ಲ ಸ್ಥಿತಿ-ಗತಿಯನ್ನು ಸ್ವಲ್ಪ ಕಲ್ಪಿಸಿಕೊಳ್ಳಿ. ಈ ಕರ್ನಾಟಕದ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಮಹಾರಾಷ್ಟ್ರಕ್ಕೊ ತಮಿಳುನಾಡುವಿಗೊ ಮಾರಿಕೊಂಡರೂ ಏನೂ ಆಶ್ಚರ್ಯವಿಲ್ಲ. ಅದಾದರೂ , ನಮ್ಮ ದೇಶದರೇ ಎಂದು ಸುಮ್ಮನಿರಬಹುದು. ಆದರೆ ಕೇಂದ್ರದಲ್ಲಿರುವ ಎ. ರಾಜಾನಂತ ಹಣ ಪಿಶಾಚಿಗಳಿಂದ ನಮ್ಮ ದೇಶವನ್ನೇ ಹರಾಜಿಗಿಡುವ ಸ್ಥಿತಿ ಬರಬಹುದು. ಆರ್ಥಿಕ ಬಿಕ್ಕಟ್ಟಿನಿಂದಾಗಿ ನಮ್ಮ ದೇಶ ಮತ್ತೆ ಗುಲಾಮಗಿರಿಗೆ ಒಳಪಟ್ಟರೆ ಮತ್ತೊಬ್ಬ ಗಾಂಧೀಜಿ ಹುಟ್ಟಿಬರುವ ಭಾಗ್ಯ ನಮಗಿರಬೇಕಲ್ಲ!!!

This time the situation is very serious guys, atleast in Karnataka. ನಮಗೆಲ್ಲ ಗೊತ್ತಿರುವಂತೆ ಕರ್ನಾಟಕದ ಪ್ರಸ್ತುತ ರಾಜಕಾರಣದಲ್ಲಿ ರಾಜ್ಯವನ್ನು ಉದ್ಧಾರ ಮಾಡಬಲ್ಲ ಒಬ್ಬ ಜನನಾಯಕನೂ ಉಳಿದಿಲ್ಲ. ಎಲ್ಲ, ಒಬ್ಬರ ಹುಳುಕು ಇನ್ನೊಬ್ಬರು ಕೆದಕುತ್ತಾ ದಿನಗಳನ್ನು ದೂಡಿ 5 ವರ್ಷದ ಕಾಲಾವಧಿಯಲ್ಲೇ ಕುಬೇರರಾಗುವ ನಾ(ಲಾ)ಯಕರೇ ತುಂಬಿದ್ದಾರೆ. But guys ಇದು ಆ ರಾಜಕಾರಣಿಗಳೆಲ್ಲರ ಊಹೆಗಳನ್ನು ಸುಳ್ಳಾಗಿಸುವ ಸದವಕಾಶ . ನಾವೆಲ್ಲ ಮಾಡಬೇಕಾಗಿರುವದಿಷ್ಟೆ, ಸ್ವಲ್ಪ ನಮ್ಮೆಲ್ಲರ ದೈನಂದಿನ ಬದುಕಿಗೆ disc brake ಹಾಕೋಣ ಮತ್ತು ತಾಳ್ಮೆಯಿಂದ ಯೋಚಿಸಿ ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸೋಣ (ಈ ಮಾತು ಎಲ್ಲರಿಗೂ ಮನದಟ್ಟಾಗಬೇಕು, ಓದುಗನು ಸಾಫ್ಟವೇರ್ ಎಂಜಿನಿಯರ್ನೇ ಆಗಿರಲಿ ರೈತನೇ ಆಗಿರಲಿ, ಆತನ ತಿಂಗಳ ಸಂಬಳ ಎಷ್ಟೇ ಆಗಿರಲಿ, ಜಾತಿ ವರ್ಣಗಳೇನೇ ಆಗಿರಲಿ, ಮುಂದೆ ನಮ್ಮೆಲ್ಲರ ಜೀವನದಲ್ಲಿ ಇವರಿಂದ ನಿರ್ಮಿತವಾಗಬಲ್ಲ ಸುನಾಮಿಯನ್ನು ಈಗಲೇ ಮಟ್ಟ ಹಾಕುವದು, ನಮ್ಮ ಸದ್ಯದ ಗುರಿಯಾಗಿರಲಿ).

After lot of vigorous thinking i have found the ultimate and one and only solution for all of these. ಅದೇನೆಂದರೆ, ಇನ್ನು ಮುಂದೆ ಬರುವ ಚುನಾವಣೆಗಳಲ್ಲಿ ಇದೇ ನಾ(ಲಾ)ಯಕರು ಸ್ಪರ್ಧಿಸಿದರೆ ನಾವು ಮತಚಲಾಯಿಸುವದೇ ಬೇಡ. ಇದು ಅಪರಾಧವಾದರೂ ಪರವಾಗಿಲ್ಲ. ಭಾರತಮಾತೆಯನ್ನು ದುಷ್ಟರಿಂದ ರಕ್ಷಿಸಿದ ಹೆಮ್ಮೆ ನಮಗಿರಲಿ.  ಸಮಯಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕೆಂದು ಬಯಸುವ ನಾವು, ಸಂವಿಧಾನದ ಮರು   ನಿರ್ಮಾಣಕ್ಕೆ ತೀವ್ರವಾಗಿ ಪ್ರಯತ್ನಿಸಬೇಕು. ಇದರಲ್ಲಿ ಜನದ್ರೋಹ ಎಸಗುವ ಜನನಾಯಕರಿಗೆ ಅತಿ ಕಠಿಣ ಕಾಯಿದೆಗಳನ್ನು ರಚಿಸಬೇಕು. ಅಷ್ಟೇ ಅಲ್ಲ ಪ್ರತಿಯೊಂದು ಮಂತ್ರಿಗಿರಿಗೂ ಅಥವಾ ಪದವಿಗೂ ಅದರದ್ದೇ ಆದ ಕನಿಷ್ಟ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸೋಣ. ಮಂತ್ರಿ ಪದವಿಗಳು ದೇಶದಲ್ಲೇ ಗೌರವಾನ್ವಿತ ಮತ್ತು ಜವಾಬ್ದಾರಿಯುತ ಹುದ್ದೆಗಳಾದ್ದರಿಂದ ಅವುಗಳಿಗೆ ಆಯ್ಕೆಯಾಗಲು ಬೇಕಾಗುವ ಅರ್ಹತೆಗಳೂ ಕಠಿಣ ಸಾಧ್ಯವಾಗಿರಬೇಕು. ಅಂದರೆ ಕೆಲವೇ ಕೆಲವು ಜನರು ಪೂರ್ಣಗೊಳಿಸುವಂತಹವಾಗಿರಬೇಕು.

ಇದಲ್ಲದೇ, ನಮ್ಮ ರಾಜ್ಯವನ್ನು ಮತ್ತು ನಮ್ಮ ದೇಶವನ್ನು ಉದ್ಧಾರಗೊಳಿಸುವಂತ ನಿಮ್ಮ ಎಲ್ಲ ಹೊಸ ಹೊಸ ವಿಚಾರಗಳಿಗೂ ಸದಾ ಸ್ವಾಗತ. ಅವುಗಳನ್ನೂ ಈ blogನಲ್ಲಿ ಪ್ರಕಟಿಸಲಾಗುವದು.


ಕೊನೆಯದಾಗಿ ಹೇಳುವದಿಷ್ಟೇ ಸ್ನೇಹಿತರೇ, ಈಗ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಭವಿಷ್ಯ ಊಹಿಸಲಾಗದಷ್ಟು ಯಾತನಾಮಯವಾಗಬಹುದು. ಓದಿ, ಒಂದು ಸ್ವಲ್ಪ ಹೊತ್ತು ಏಕಾಂತವಾಗಿ ಕುಳಿತು ಯೋಚಿಸಿ ಮತ್ತು ನೀವೂ ನನ್ನ ವಿಚಾರಗಳನ್ನು ಸಮರ್ಥಿಸುತ್ತಿದ್ದರೆ ನಿಮ್ಮ ಸಮರ್ಥನೆಗಳನ್ನು ಬರೆದು ಕಳಿಸಿ. ನಿಮ್ಮ ಹೊಸ ಹೊಸ ವಿಚಾರಗಳು ಸ್ವಾಗತಾರ್ಹ. ಇದನ್ನು ಓದಿದ ಮೇಲೂ ನಾವೆಲ್ಲರೂ ನಾಳೆ ಬೆಳಿಗ್ಗೆ ಎದ್ದು ನಮ್ಮ ನಮ್ಮ ಕೆಲಸಗಳಿಗೆ ತೆರಳುತ್ತೇವೆ. ದೇಶದ ಬಗ್ಗೆ ಯೋಚಿಸಲು ಯಾರ ಬಳಿಯೂ ಸಮಯವಿಲ್ಲ. This is our weakness guys and the worst part is, the politicians know it. But dont you worry guys!!! we the youth of India have the power of achieving a political re-incarnation and for the citizens of India sky is the only limit....
 
ವಂದೇ ಮಾತರಂ! ಜೈ ಹಿಂದ್!

 
With great expectations from you,
Shrinidhi Kulkarni

No comments: